ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ ಧಾರವಾಡ: ಶ್ರೀನಗರದಲ್ಲಿ ಭೀಕರ ಅಪಘಾತ ಟಿಪ್ಪರ್ ಹರಿದು; ಮಹಿಳೆ ಸ್ಥಳದಲ್ಲೇ ಸಾವು

ಧಾರವಾಡ: ಧಾರವಾಡದ ಶ್ರೀನಗರದಲ್ಲಿ ಸ್ಕೂಟಿ ಚಾಲನೆ ಮಾಡುತ್ತಿದ್ದ ಮಹಿಳೆಯ ಮೇಲೆ ಕಡಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹರಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡದಲ್ಲಿ ನಡೆದಿದೆ.

ಶ್ರೀನಗರದ ಬಳಿಯಲ್ಲಿ ಸ್ಕೂಟಿ ಮೇಲೆ ಮಹಿಳೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಕೆಳಗಡೆ ಬಿದ್ದಾಗ, ಮಹಿಳೆಯ ಮೇಲೆ ಟಿಪ್ಪರ್ ಹರೆದ ಪರಿಣಾಮ ಮಹಿಳೆಯ ದೇಹ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಅಪಘಾತ ಆಗುತ್ತಿದ್ದ ಹಾಗೆ ಟಿಪ್ಪರ್ ಚಾಲಕ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ, ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಭೇಟಿಯನ್ನು ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾಣಿಸಿ ಮೃತಪಟ್ಟ ಮಹಿಳೆ ಯಾರು ಎಂಬ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.ಈ ಸಂಬಂಧ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/10/2022 04:50 pm

Cinque Terre

112.73 K

Cinque Terre

14

ಸಂಬಂಧಿತ ಸುದ್ದಿ