ಹುಬ್ಬಳ್ಳಿ: ನಗರದಲ್ಲಿ ಕಾರಿನ್ ಬ್ರೇಕ್ ಫೇಲ್ ಆಗಿ ರಸ್ತೆ ಬದಿಯ ಪುಟ್ಪಾತ್ ಮೇಲೆ ಕಾರು ಏರಿದ ಪರಿಣಾಮ ನಾಲ್ಕು ಜನರು ಗಾಯಗೊಂಡ ಘಟನೆ ವಿದ್ಯಾನಗರದ ಬಳಿಯಲ್ಲಿ ನಡೆದಿದೆ.
ಧಾರವಾಡ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರಿನ ಬ್ರೇಕ್ ಏಕಾಏಕಿ ಫೇಲ್ ಆದ ಪರಿಣಾಮ ಚಾಲಕನ ನಿಯಂತ್ರಣಕ್ಕೆ ಸಿಗದೇ ಆರ್ಟ್ಸ ಕಾಲೇಜು ಬಳಿಯಲ್ಲಿ ಫುಟ್ಪಾತ್ ಏರಿದ ಪರಿಣಾಮ ನಾಲ್ಕು ಜನ ಗಾಯಗೊಂಡಿದ್ದು.
ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದ್ದು, ಸ್ಥಳಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
21/09/2022 07:16 pm