ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಾರು ಹಾಗೂ ಬೈಕ್ ನಡುವೆ ಅಪಘಾತ, ಓರ್ವ ಗಾಯ

ನವಲಗುಂದ : ನವಲಗುಂದ ಪಟ್ಟಣದ ಹೊರ ವಲಯದ ಗೊಬ್ಬರಗುಂಪಿ ಕ್ರಾಸ್ ಬಳಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಂಭೀರ ಗಾಯವಾದ ಘಟನೆ ಶುಕ್ರವಾರ ನಡೆದಿದೆ.

ಗಾಯಗೊಂಡ ಬೈಕ್ ಸವಾರನನ್ನು ಸವದತ್ತಿ ತಾಲ್ಲೂಕಿನ ಉಗ್ಗರಗೋಳ ನಿವಾಸಿಯಾದ 59 ವರ್ಷ ವಯಸ್ಸಿನ ಯಲ್ಲಪ್ಪ ಪಕ್ಕೀರಪ್ಪ ಭೋವಿ ಎಂದು ಗುರುತಿಸಲಾಗಿದ್ದು, ಉಗ್ಗರಗೋಳದಿಂದ ನವಲಗುಂದ ಕಡೆ ಬರುತ್ತಿದ್ದ ಬೈಕ್ ಸವಾರ ಹಾಗೂ ಹುಬ್ಬಳ್ಳಿಯಿಂದ ಬಿಜಾಪುರ ಕಡೆ ತೆರಳುತ್ತಿದ್ದ ಕಾರಿನ ನಡುವೆ ಸಂಭಾವಿಸಿದೆ.

ಗಾಯಾಳನ್ನು ಪ್ರಥಮ ಚಿಕಿತ್ಸೆಗಾಗಿ ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಳಿಸಲಾಗಿದೆ. ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By : Abhishek Kamoji
Kshetra Samachara

Kshetra Samachara

16/09/2022 08:01 pm

Cinque Terre

73.85 K

Cinque Terre

0

ಸಂಬಂಧಿತ ಸುದ್ದಿ