ಹುಬ್ಬಳ್ಳಿ: ಬೃಹತ್ ಆಕಾರದ ಲಾರಿಯೊಂದು ಆಶ್ಚರ್ಯಕರ ರೀತಿಯಲ್ಲಿ ಫಲ್ಟಿಯಾಗಿರುವ ಘಟನೆಯೊಂದು ದೇವರಗುಡಿಹಾಳ ಬಳಿಯಲ್ಲಿ ನಡೆದಿದೆ.
ಅಚ್ಚರಿಯ ರೀತಿಯಲ್ಲಿ ಲಾರಿ ಪಲ್ಟಿಯಾಗಿದ್ದು, ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತರ ಪ್ರದೇಶದಿಂದ ಸೊಲ್ಲಾಪುರ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತವಾಗಿದ್ದು, ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಲಾರಿ ಬಿದ್ದ ಸ್ಥಿತಿ ನೋಡಿದರೆ ಭಾರೀ ಭಯಾನಕವಾಗಿದೆ.
Kshetra Samachara
07/09/2022 03:21 pm