ಹುಬ್ಬಳ್ಳಿ: ಕಲ್ಲಿನ ಕಡಿಯನ್ನು ಹೇರಿಕೊಂಡು ಹೊರಟಿದ್ದ ಟಿಪ್ಪರ್ ವಾಹನವೊಂದರ ಟಾಯರ್ ಬ್ಲಾಸ್ಟ್ ಆಗಿ ರಸ್ತೆಯಲ್ಲಿ ಫಲ್ಟಿಯಾಗಿರುವ ಘಟನೆ ಹುಬ್ಬಳ್ಳಿಯ ನವನಗರದ ಆರ್.ಟಿ.ಒ ಆಫೀಸ್ ಎದುರಿನಲ್ಲಿ ನಡೆದಿದೆ.
ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಾಹನದ ಟಾಯರ್ ಬ್ಲಾಸ್ಟ್ ಆಗಿರುವ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಕಲ್ಲಿನ ಕಡಿ ರಸ್ತೆಯ ತುಂಬ ಚೆಲ್ಲಾಪಿಲ್ಲಿಯಾಗಿದೆ ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ನವನಗರ ಪೊಲೀಸ್ ಕಮೀಷನರ್ ಕಚೇರಿಯ ಕೂಗಳತೆಯ ದೂರದಲ್ಲಿ ಈ ಘಟನೆ ಸಂಭವಿಸಿದೆ.
Kshetra Samachara
05/09/2022 06:23 pm