ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೊಚ್ಚಿ ಹೋದ ಯುವಕ, ಮುಂದುವರೆದ ರಕ್ಷಣಾ ಕಾರ್ಯ

ನವಲಗುಂದ : ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದ ಬಳಿ ಹಾದು ಹೋಗುವ ಬೆಣ್ಣೆ ಹಳ್ಳದ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಯುವಕನೋರ್ವ ಕೊಚ್ಚಿ ಹೋಗಿದ್ದ. ಈ ಹಿನ್ನೆಲೆ ತಾಲೂಕಾ ಆಡಳಿತದಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.

ತಡಹಾಳ ಗ್ರಾಮದ 32 ವಯಸ್ಸಿನ ಸದಾನಂದ ಶಿವಣಪ್ಪ ಮಾದರ ಎಂಬುವವರು ಬೆಣ್ಣೆ ಹಳ್ಳದ ಸೇತುವೆ ದಾಟುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸಮೇತ ಹಳ್ಳದಲ್ಲಿ ಬಿದ್ದಿದ್ದಾರೆ. ಅಪಾರ ಪ್ರಮಾಣದ ನೀರಿನ ಹರಿವು ಇದ್ದಿದ್ದರಿಂದ ಯುವಕ ಕೊಚ್ಚಿ ಹೋಗಿದ್ದಾನೆ.

ಈ ಹಿನ್ನೆಲೆ ಸ್ಥಳಕ್ಕೆ ಎನ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕ ದಳ ತಂಡ ಧಾವಿಸಿ, ರಕ್ಷಣಾ ಕಾರ್ಯ ಮುಂದುವರೆಸಿದೆ. ಇದುವರೆಗೂ ಯುವಕನ ದೇಹ ಪತ್ತೆಯಾಗಿಲ್ಲ. ಸ್ಥಳದಲ್ಲಿ ನವಲಗುಂದ ತಹಶೀಲ್ದಾರ್ ಅನಿಲ ಬಡಿಗೇರ, ಗ್ರಾಮ ಪಂಚಾಯತ್ ಪಿಡಿಓ, ಸಿಪಿಐ ದೃವರಾಜ ಪಾಟೀಲ, ಪಿಎಸ್ ಐ ನವೀನ ಜಕ್ಕಲಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

Edited By : Manjunath H D
Kshetra Samachara

Kshetra Samachara

02/09/2022 08:11 pm

Cinque Terre

110.03 K

Cinque Terre

3

ಸಂಬಂಧಿತ ಸುದ್ದಿ