ಹುಬ್ಬಳ್ಳಿ: ಹೊಲದಲ್ಲಿ ಕೆಲಸ ಮುಗಿಸಿಕೊಂಡು ಹೊರಟಿದ್ದ ಚಕ್ಕಡಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಚಕ್ಕಡಿ ಪಲ್ಟಿಯಾಗಿ ಎತ್ತಿನ ಕಾಲೊಂದು ಮುರಿದ ಘಟನೆ ಗೋಕುಲ್ ಗ್ರಾಮದಲ್ಲಿ ನಿನ್ನೇ ರಾತ್ರಿ ಸಂಭವಿಸಿದೆ.
ಗೋಕುಲ್ ಗ್ರಾಮದ ರೈತರೊಬ್ಬರು ತಮ್ಮ ಹೊಲದಲ್ಲಿ ಕೆಲಸ ಮುಗಿಸಿ ಚಕ್ಕಡಿ ಸಮೇತ ಗೋಕುಲ್ ಗ್ರಾಮಕ್ಕೆ ಮರಳುತ್ತಿದ್ದಾಗ ಬಿಳಿ ಬಣ್ಣದ ಕಾರೊಂದು ಚಕ್ಕಡಿಗೆ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ, ಚಕ್ಕಡಿ ಪಲ್ಟಿಯಾಗಿ ಎತ್ತಿನ ಕಾಲು ಮುರಿದಿದೆ.
ಕೂಡಲೇ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಕೆಲವು ಯುವಕರು ಪಲ್ಟಿಯಾದ ಚಕ್ಕಡಿಯನ್ನು ಎತ್ತಿ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಗಾಯಗೊಂಡ ಎತ್ತಿಗೆ ಹಾಗೂ ರೈತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kshetra Samachara
29/08/2022 10:10 am