ಹುಬ್ಬಳ್ಳಿ : ಹು-ಧಾ ಬೈಪಾಸ್ ನಲ್ಲಿ ಇಂದು ಬೆಳಗಿನ ಜಾವ ಲಾರಿ ಹಾಗೂ ಖಾಸಗಿ ವೋಲ್ವೋ ಬಸ್ ನಡುವೆ ಬೈಪಾಸ್ ನಲ್ಲಿ ನಡೆದ ಅಪಘಾತದ ಕುರಿತು ಲಾರಿಯಲ್ಲಿದ್ದ ಕ್ಲೀನರ್ ನಾಸಿರ್ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಬೆಳಿಗ್ಗೆ ನಮ್ಮ ಲಾರಿ ಕೇರಳ ಕಡೆಯಿಂದ ಪುನಾ ಕಡೆ ಹೋಗುತ್ತಿದ್ದಾಗ ಬೈಪಾಸ್ ಬಳಿಯ ಕಲಘಟಗಿ ಕ್ರಾಸ್ ಬಳಿಯಲ್ಲಿ ಪುನಾ ಕಡೆಯಿಂದ ವೋಲ್ವೋ ಬಸ್ ಅತಿ ಜೋರಾಗಿ ಲಾರಿಯೊಂದನ್ನು ಓವರ ಟೇಕ್ ಮಾಡಿಕೊಂಡು ಬಂದಿತು,ಕೂಡಲೇ ನಾವು ನಮ್ಮ ಲಾರಿಯನ್ನು ಪಕ್ಕಕ್ಕೇ ತೆಗೆದುಕೊಂಡು ಅಪಘಾತ ತಪ್ಪಿಸಲು ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ ಎಂದರು.
ವೋಲ್ವೋ ಬಸ್ ಚಾಲಕ ಅತಿ ಜೋರಾಗಿ ಬಸ್ ಚಾಲನೆ ಮಾಡುತ್ತಿದ್ದ ಪರಿಣಾಮ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೆ, ನಮ್ಮ ಲಾರಿಗೆ ಬಂದು ಡಿಕ್ಕಿ ಹೊಡೆದು ನನಗೆ ಹಾಗೂ ನಮ್ಮ ಲಾರಿಯ ಚಾಲಕರು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಗೆ ತಂದಿಟ್ಟಿದ್ದಾನೆ ಎಂದು ಘಟನೆಯ ಕುರಿತು ಲಾರಿ ಕ್ಲೀನರ್ ನಾಸಿರ್ ವಿವರಿಸಿದರು.
Kshetra Samachara
25/08/2022 07:12 pm