ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಹುಬ್ಬಳ್ಳಿ ಬೈಪಾಸ್‌ನಲ್ಲಿ ಭೀಕರ ರಸ್ತೆ ಅಪಘಾತ; ಹು-ಡಾ ಮಾಜಿ ಅಧ್ಯಕ್ಷನ ಪುತ್ರ ದುರ್ಮರಣ

ಹುಬ್ಬಳ್ಳಿ: ಸ್ನೇಹಿತರೆಲ್ಲರೂ ಸೇರಿಕೊಂಡು ನುಗ್ಗಿಕೆರಿ ಹನುಮಪ್ಪನ ದರ್ಶನ ಪಡೆಯಲು ಹೋಗಿದ್ದರು. ಆದ್ರೆ ರಾತ್ರೋರಾತ್ರಿ ವಿಧಿ ಇವರ ಜೀವನದಲ್ಲಿ ಆಟವಾಡಿದೆ.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ನಾಗುಶಾ ಕಲಬುರ್ಗಿ ಅವರ ಮೂರನೇ ಪುತ್ರ ತಿಲಕ್ ಕಲಬುರ್ಗಿ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ನೇಹಿತರೆಲ್ಲರೂ ಸೇರಿ ಧಾರವಾಡದ ನುಗ್ಗಿಕೆರಿ ಹನುಮಪ್ಪ ದರ್ಶನ ಪಡೆಯಲು ಹೋಗಿದ್ದರು. ದರ್ಶನ ಪಡೆದು ಮರಳಿ ಬರುವಾಗ ತಿಲಕ್ ನಿಯಂತ್ರಣ ತಪ್ಪಿದ ಬೈಕ್ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಿಲಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂದೆ ಕುಳಿತಿದ್ದ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

19 ವರ್ಷ ವಯಸ್ಸಿನ ತಿಲಕ್ ಸ್ವಾತಂತ್ರ್ಯ ದಿನದಂದೇ ಕೊನೆ ಉಸಿರು ಎಳೆದಿದ್ದಾನೆ. ಪ್ರೀತಿಯ ಮಗ ತಿಲಕ್‌ನನ್ನು ಕಳೆದುಕೊಂಡ ನಾಗುಶಾ ಕಲಬುರ್ಗಿ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈಗಾಗಲೇ ಕಿಮ್ಸ್ ಆಸ್ಪತ್ರೆಯಲ್ಲಿ ತಿಲಕ್ ಶವವನ್ನು ಇಟ್ಟಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಕಲ್ಬುರ್ಗಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

15/08/2022 08:00 am

Cinque Terre

55.31 K

Cinque Terre

37

ಸಂಬಂಧಿತ ಸುದ್ದಿ