ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಪಾಸ್ ಬಳಿ ಸರಣಿ ಅಪಘಾತ : ಆಂಬ್ಯುಲೆನ್ಸ್ ಜೊತೆ ಉರುಳಿ ಬಿದ್ದ ಕಾರು

ಹುಬ್ಬಳ್ಳಿ : ನಗರದ ಬೈ ಪಾಸ್ ಬಳಿಯಲ್ಲಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಆಂಬ್ಯುಲೆನ್ಸ್ ಸೇರಿ ಮೂರು ವಾಹನಗಳು ಅಪಘಾತವಾದ ಘಟನೆ ಈಗಷ್ಟೇ ನಡೆದಿದೆ.

ತಾರಿಹಾಳ ಬ್ರಿಡ್ಜ್ ಬಳಿಯಲ್ಲಿ ವೇಗವಾಗಿ ಬರುತ್ತಿದ್ದ ಆಂಬ್ಯುಲೆನ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ,ಕಾರು ಹಾಗೂ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಪಕ್ಕದಲ್ಲೇ ಆಂಬ್ಯುಲೆನ್ಸ್ ಹಾಗೂ ಕಾರು ಉರುಳಿ ಬಿದ್ದಿದ್ದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ಮರಳುಸಿದ್ದಪ್ಪ ಭೇಟಿಯನ್ನು ನೀಡಿದ್ದು,ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಿದ್ದಾರೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/08/2022 07:38 pm

Cinque Terre

55.93 K

Cinque Terre

2

ಸಂಬಂಧಿತ ಸುದ್ದಿ