ಹುಬ್ಬಳ್ಳಿ:ಬಾರಿ ಗಾತ್ರದ ಲಾರಿಯೊಂದು ಹುಬ್ಬಳ್ಳಿಯ ಕಮರಿಪೇಟ್ ನಲ್ಲಿ ಸಾಗುತ್ತಿದ್ದಾಗ ಚರಂಡಿಯ ಬ್ರಿಡ್ಜ್ ಕುಸಿದ ಪರಿಣಾಮ ಲಾರಿ ಲಾಕ್ ಆದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ಕಮರಿಪೇಟ್ ನಲ್ಲಿನ ಗೋಡೌನ ಗೆ ಸಾಮಗ್ರಿಗಳನ್ನು ಇಳಿಸಲು ಬಂದ ಲಾರಿ ದುರ್ಗಾದೇವಿ ಮಂಗಲ ಭವನ ಬಳಿ ಬ್ರಿಡ್ಜ್ ಲಾರಿಯ ಭಾರವನ್ನು ತಾಳಲಾರದೆ ಕುಸಿದು ಸಿಕ್ಕಾಕಿಕೊಂಡಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು,ಲಾರಿಯನ್ನು ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
Kshetra Samachara
06/08/2022 09:28 am