ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕುರುವಿನಕೊಪ್ಪದ ಬಳಿ ಅಪಘಾತ,ನಾಲ್ವರು ಮಹಿಳೆಯರಿಗೆ ಗಂಭೀರ ಗಾಯ!

ಕಲಘಟಗಿ:ಕುರುವಿನಕೊಪ್ಪದ ಬಳಿಯಲ್ಲಿ ಕ್ಯಾಂಟರ್ ಹಾಗೂ ಟಾಟಾ ಏಸ್ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ಕು ಜನ ಮಹಿಳೆಯರು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಕುರುವಿನಕೊಪ್ಪ ದಿಂದ ಕಲಘಟಗಿ ಕಡೆ ಹೊರಟಿದ್ದ ಟಾಟಾ ಏಸ್ ವಾಹನಕ್ಕೆ ಹಿಂಬದಿಯಿಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ,ಟಾಟಾ ಏಸ್ ವಾಹನದ ಹಿಂದೆ ಕೂತಿದ್ದ ನಾಲ್ಕು ಜನ ಮಹಿಳೆಯರಿಗೆ ಗಾಯವಾಗಿದೆ.

ಅಪಘಾತ ಆಗುತ್ತಿದ್ದ ಹಾಗೆ ಕ್ಯಾಂಟರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಕೂಡಲೇ ಗಾಯಗೊಂಡ ಮಹಿಳೆಯರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

Edited By : Shivu K
Kshetra Samachara

Kshetra Samachara

03/08/2022 08:25 pm

Cinque Terre

53.96 K

Cinque Terre

1

ಸಂಬಂಧಿತ ಸುದ್ದಿ