This is a modal window.
Beginning of dialog window. Escape will cancel and close the window.
End of dialog window.
ಹುಬ್ಬಳ್ಳಿ: ಆತ ಹಸನ್ಮುಖಿ ಯುವಕ ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹುಮ್ಮಸ್ಸಿನಲ್ಲಿ ತನ್ನ ಮನೆಯ ಜೀವನದ ಬಂಡಿಯನ್ನು ಸಾಗಿಸಲು ತನ್ನ ಮಾವನ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ.ಆದ್ರೆ ಮೊನ್ನೆ ನಡೆದ ಆ ದುರಂತದದಿಂದ ಆತನ ಕುಟುಂಬವೇ ಇದೀಗ ಕಂಗಾಲಾಗಿದ್ದು ಮುಂದಿನ ನಮ್ಮ ಜೀವನ ಬಂಡಿ ಹೇಗೆ ಎಂಬ ಆತಂಕದಲ್ಲಿದೆ.
ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈ ಯುವಕನ ಹೆಸರು ದರ್ಶನ ವೀರಾಪುರ ಅಂತಾ,ಮೊನ್ನೆ ಗೋಕುಲ್ ರಸ್ತೆಯಲ್ಲಿರುವ ಶ್ರೇಯಾ ಜುಪಿಟರ್ ಬಿಲ್ಡಿಂಗ್ ನಲ್ಲಿನ ತನ್ನ ಮಾವನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ,ಬಂದ ಬಾರಿ ಮಳೆಯಿಂದಾಗಿ ಮಳೆ ನೀರನ್ನು ತೆರವುಗೊಳಿಸುವಾಗ ಬಿಲ್ಡಿಂಗ್ ಗೋಡೆ ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದ.
ಈ ದುರಂತಕ್ಕೆ ಒಬ್ಬ ಯುವಕನ ಪ್ರಾಣ ಹೋದ ಮಾಹಿತಿ ಗೊತ್ತಿದ್ರು ಕೂಡಾ ಬಿಲ್ಡಿಂಗ್ ಮಾಲೀಕರು ಸೌಜನ್ಯಕ್ಕೂ ನಮ್ಮನ್ನು ಬಂದು ಮಾತನಾಡಿಸಿಲ್ಲ. ಹೀಗಾಗಿ ಆತನ ಶವವನ್ನು ಬಿಲ್ಡಿಂಗ್ ಬಳಿ ತಂದು ಸವಿತಾ ಸಮಾಜದ ಮುಖಂಡರು ಪ್ರತಿಭಟನೆ ಮಾಡಲು ಕೂಡಾ ಮುಂದಾಗಿದ್ದರು.
ಆದ್ರೆ ನ್ಯಾಯಾಂಗದ ಮೇಲೆ ನಂಬಿಕೆ ಇರೋ ಕಾರಣ ಕಾನೂನು ಪ್ರಕಾರ ಯಾವ ರೀತಿಯಾಗಿ ಹೋರಾಟ ಮಾಡಬೇಕು ಅಂತಾ ಹಿರಿಯರು ಚರ್ಚೆ ಮಾಡಿ ಶವವನ್ನು ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದು,ಬಿಲ್ಡಿಂಗ್ ಮಾಲೀಕರ ಮೇಲೆ ಗೋಕುಲ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ.
Kshetra Samachara
29/07/2022 09:02 am