ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಬ್ರೇಕಿಂಗ್...: ಶ್ರಯಾ ಜುಪಿಟರ್ ಕಾಂಪ್ಲೆಕ್ಸ್ ತಡೆಗೋಡೆ ಬಿದ್ದು ಯುವಕ ಸಾವು

ಹುಬ್ಬಳ್ಳಿ: ಮಳೆ ಬಂದ ಕಾರಣ ಅಂಗಡಿ ಒಳಗೆ ನೀರು ನುಗ್ಗಿರುವುದನ್ನು ಹೊರಗೆ ತಗೆಯುತ್ತಿರುವಾಗ ತಡೆಗೋಡೆ ಬಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಗೋಕುಲ ರೋಡ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶ್ರೇಯಾ ಜುಪಿಟರ್ ಕಾಂಪ್ಲೆಕ್ಸ್ ಬಳಿ ನಡೆದಿದೆ.

18 ವರ್ಷದ ದರ್ಶನ ಹಿರಾಪೂರ ಸಾವನ್ನಪ್ಪಿದ ಯುವಕ. ಶ್ರೇಯಾ ಜುಪಿಟರ್ ಕಾಂಪ್ಲೆಕ್ಸ್ ನ ಕೆಳ ಮಹಡಿಯಲ್ಲಿ ಸಲೂನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಇಂದು ಮಳೆ ಬಂದ ಕಾರಣ ಚರಂಡಿ ನೀರು ಅಂಗಡಿ ಒಳಗೆ ನುಗ್ಗಿದ ಪರಿಣಾಮ, ನೀರು ತಗೆಯುತ್ತಿರುವಾಗ ಪಕ್ಕದಲ್ಲಿದ್ದ ಕಂಪೌಂಡ ದರ್ಶನ ಮೇಲೆ ಕುಸಿದು ಬಿದ್ದಿದೆ.

ಇನ್ನು ದರ್ಶನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೂಡಲೆ ಸ್ಥಳದಲ್ಲಿದ್ದವರು ಆಸ್ಪತ್ರೆಗೆ ರವಾನಿಸಿದರು ಪ್ರಯೋಜನವಾಗಿಲ್ಲ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅದೇ ವಾರ್ಡ್ ಸದಸ್ಯ ಚೇತನ್ ಎಸ್. ಹಿರೇಕೆರೂರ ಕುಟುಂಬಸ್ಥರಿಗೆ ಸಮಾಧಾನ ಹೇಳಿದರು. ಅಷ್ಟೇ ಅಲ್ಲದೆ ಈ ಯುವಕನ ಸಾವಿಗೆ ಪರಿಹಾರ ಒದಗಿಸಬೇಕೆಂದರು.

ಇನ್ನು ಈ ಸಮಸ್ಯೆ ಬಗ್ಗೆ ಕಾಂಪ್ಲೆಕ್ಸ್ ಮಾಲೀಕರಿಗೆ ಅನೇಕ ಬಾರಿ ಬಾಡಿಗೆದಾರರು ತಿಳಿಸಿದರು ಸರಿಯಾದ ಕ್ರಮ ತೆಗೆದುಕೊಂಡಿಲ್ಲ.

ಇಂದಿನ ಈ ಅವಘಡಕ್ಕೆ ಕಾಂಪ್ಲೆಕ್ಸ್ ಮಾಲೀಕರೇ ಹೊಣೆ ಎಂದು ಮಳಿಗೆ ಮಾಲೀಕರು ಆರೋಪ ಮಾಡುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

27/07/2022 07:35 pm

Cinque Terre

58.95 K

Cinque Terre

8

ಸಂಬಂಧಿತ ಸುದ್ದಿ