ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೃದಯಾಘಾತದಿಂದ ಎಸಿಪಿ ಮಲ್ಲನಗೌಡ ಹೊಸಮನಿ ಸಾವು

ಹುಬ್ಬಳ್ಳಿ: ಖಾಸಗಿ ಕೆಲಸಕ್ಕೆ ಧಾರವಾಡ ಜಿಲ್ಲೆಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ಎಸಿಪಿ ಮಲ್ಲನಗೌಡ ಹೊಸಮನಿ ಅವರು ಶಿಕಾರಿಪುರದ ಬಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಈ ಹಿಂದೆ ಹುಬ್ಬಳ್ಳಿಯ ಸಂಚಾರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಲ್ಲನಗೌಡ ಹೊಸಮನಿ ಇತ್ತೀಚಿಗೆ ಅಷ್ಟೆ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದರು. ಆದರೆ ಇದುವರೆಗೂ ಚಾರ್ಜ್ ತೆಗೆದುಕೊಂಡಿರಲಿಲ್ಲ.

ಶಿವಮೊಗ್ಗಕ್ಕೆ ಹೊರಟಿದ್ದ ವೇಳೆ ಮಲ್ಲನಗೌಡ ಹೊಸಮನಿ ಅವರಿಗೆ ಶಿಕಾರಿಪುರದ ಬಳಿ ಹೃದಯಾಘಾತ ಆಗಿದೆ. ತಕ್ಷಣವೇ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಪ್ರಯೋಜನವಾಗಿಲ್ಲ. ಇದೀಗ ಹೊಸಮನಿ ಅವರ ಪಾರ್ಥಿವ ಶರೀರವನ್ನು ನಗರಕ್ಕೆ ತೆಗೆದುಕೊಂಡು ಬರಲಾಗುತ್ತಿದೆ. ಗಾಂಧಿನಗರ ಮನೆಯಲ್ಲಿ ಶೋಕ ಮಡುಗಟ್ಟಿದೆ.

Edited By : Vijay Kumar
Kshetra Samachara

Kshetra Samachara

17/07/2022 07:27 pm

Cinque Terre

77.59 K

Cinque Terre

51

ಸಂಬಂಧಿತ ಸುದ್ದಿ