ಕಲಘಟಗಿ: ತಾಲೂಕಿನ ಪರಸಾಪುರ ಗ್ರಾಮದಲ್ಲಿ ವಿದ್ಯುತ್ ತಂತಿ ನೆಲಕ್ಕೆ ಉರುಳಿ 13 ವರ್ಷದ ಬಾಲಕಿ ಮೃತ ಪಟ್ಟ ದಾರುಣ ಘಟನೆ ಗುರುವಾರ ಜರುಗಿದೆ.
ಗ್ರಾಮದ ಸಿಮ್ರಾನ್ ಬಾನು ಇಮಾಮ್ ಸಾಬ್ ಬಡಿಗೇರ ಎಂಬ ಬಾಲಕಿ ಮನೆ ಮುಂದೆ ಕೆಲಸ ಮಾಡುವಾಗ ವಿದ್ಯುತ್ ಲೈನ್ ಹರಿದು ಕೆಳಗೆ ಬಿದ್ದ ಪರಿಣಾಮ ಭಯಗೊಂಡು ಬಾಲಕಿ ಓಡಿ ಹೋಗುವಾಗ ಮೈಮೇಲೆ ಎರಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲಿ ಸಾವನಪ್ಪಿರುವ ಘಟನೆ ನಡೆದಿದೆ.
ಸದ್ಯ ಬಾಲಕಿಯರ ಕುಟುಂಬಸ್ಥರು ಆಕ್ರಂದನ ಮುಗಿಲುಮಟ್ಟಿದ್ದು ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ವಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/07/2022 10:18 pm