ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಬರುವ ನಲವಡಿ ಟೋಲ್ ಗೇಟ್ ಬಳಿ ಇಬ್ಬರು ದ್ವಿಚಕ್ರವಾಹನ ಸವಾರರು ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ.
ದ್ವಿಚಕ್ರ ವಾಹನ ಸವಾರರು ಅತಿವೇಗದಲ್ಲಿ ಬಂದು ಟೋಲ್ ಗೇಟ್ ಬಳಿ ಇರುವ ರೋಡ್ ಹಂಪ್ಸ್ ನೋಡದೆ ಇರುವುದರಿಂದ ವಾಹನ ಪಲ್ಟಿಯಾಗಿ ಮುಂದೆ ಬಿದ್ದಿದೆ.
ತಕ್ಷಣವೇ ಟೋಲ್ಗೇಟ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿ ಆಸ್ಪತ್ರೆಗೆ ಕಳಿಸಿದ್ದಾರೆ. ಘಟನೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
06/07/2022 04:11 pm