ಧಾರವಾಡ: ಮಹಿಳೆಯೊಬ್ಬರ ಮೇಲೆ ಹಂದಿ ದಾಳಿ ನಡೆಸಿದ ಪರಿಣಾಮ ಆ ಮಹಿಳೆ ಕಾಲಿಗೆ ತೀವ್ರ ಗಾಯವಾಗಿರುವ ಘಟನೆ ಧಾರವಾಡದ ಗೌಳಿ ಗಲ್ಲಿಯಲ್ಲಿ ಸಂಭವಿಸಿದೆ.
ಅನಿತಾ ಜಮಾದಾರ ಎಂಬ ಮಹಿಳೆ ಕಸ ಚೆಲ್ಲಲೆಂದು ಹೋದಾಗ ಅವರ ಮೇಲೆ ಹಂದಿ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಅವರ ಕೈ ಹಾಗೂ ಕಾಲಿಗೆ ತೀವ್ರ ಪರಿಚಿದ ಗಾಯಗಳಾಗಿವೆ. ಅವರಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗೌಳಿಗಲ್ಲಿಯಲ್ಲಿ ಹಂದಿಗಳ ಕಾಟ ಜೋರಾಗಿದೆ. ಅನಿತಾ ಅವರ ಮೇಲೆ ಹಂದಿ ದಾಳಿ ನಡೆಸಿದ್ದರಿಂದ ಅಲ್ಲಿನ ಜನ ಭಯಭೀತರಾಗಿದ್ದಾರೆ. ಕೂಡಲೇ ಮಹಾನಗರ ಪಾಲಿಕೆ ಹಂದಿ ಕಾಟಕ್ಕೆ ಮುಕ್ತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
01/07/2022 05:58 pm