ಹುಬ್ಬಳ್ಳಿ: ಹುಬ್ಬಳ್ಳಿಯ ಹೃದಯ ಭಾಗವಾದ ಚೆನ್ನಮ್ಮ ಸರ್ಕಲ್ ಬಳಿ ಇಂದು ಬೆಳ್ಳಂಬೆಳಿಗ್ಗೆ ಅಪಘಾತ ಸಂಭವಿಸಿದ್ದು ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಸವಾರರ ಸ್ಥಿತಿ ಚಿಂತಾಜಕವಾಗಿದೆ.
ಮುಂಜಾನೆ ಬ್ಯಾಹಟ್ಟಿಯಿಂದ KA 25 F 1978 ನಂಬರ್‌ನ ಬಸ್, ಬಸ್ ನಿಲ್ದಾಣದತ್ತ ಹೊರಟಿತ್ತು. ಇದೇ ವೇಳೆ ಅಜಾಗುರಕತೆಯಿಂದ ಬಂದ ಎಕ್ಸೆಲ್ ವಾಹನ ಸವಾರ ಎಡ ಭಾಗಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ.
ಈ ವೇಳೆ ಬಸ್ ಚಾಲಕ ನಿರ್ವಾಹಕ ಸಮಯ ಪ್ರಜ್ಞೆ ಮೆರೆದಿದ್ದು ಕೂಡಲೇ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.ಸವಾರರಿಬ್ಬರ ಸ್ಥಿತಿ ಗಂಭೀರ ಆಗಿದ್ದು ಕೀಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಸದ್ಯ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ತನಿಖೆ ನಡೆಸುತ್ತಿದ್ದು ಗಾಯಾಳುಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.
Kshetra Samachara
30/06/2022 10:34 am