ಹುಬ್ಬಳ್ಳಿ: ವಿಧಿ ಆಟದ ಕ್ರೌರ್ಯಕ್ಕೆ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದ ದಂಪತಿಯ ಬದುಕು ಸರ್ವನಾಶವಾಗಿದ್ದು, ದೇವರು ಇಷ್ಟೊಂದು ಕ್ರೂರಿ ಆಗಿದ್ದಾನೆಯೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.
ಇತ್ತೀಚಿಗೆ ಮೂರ್ನಾಲ್ಕು ದಿನಗಳ ಹಿಂದೆ ಅಷ್ಟೇ ಮದ್ವೆ ಆಗಿದ್ದ ಪ್ರಣೀತಾ ಛಬ್ಬಿ ಮೂಲದ ಯುವಕನನ್ನ ಮದ್ವೆ ಮಾಡಿಕೊಂಡಿದ್ದಳು. ಗುರು ಹಿರಿಯರ ಸಲಹೆ ಮೇರೆಗೆ ತಡಸ್ ಕ್ರಾಸ್‌ನಲ್ಲಿ ಇರುವ ಗಾಯತ್ರಿ ತಪೋ ವನಕ್ಕೆ ಭೇಟಿ ನೀಡಲು ಇಂದು ದಂಪತಿ ಮೋಟಾರು ಬೈಕ್‌ದಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಕಾರೊಂದು ಡಿಕ್ಕಿ ಹೊಡೆದು ಪ್ರಣೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪತಿ ಕಿಮ್ಸ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಇತ್ತ ಇಬ್ಬರ ಕುಟುಂಬಸ್ಥರು ವಿಧಿ ಆಟಕ್ಕೆ ಕಣ್ಣೀರು ಹಾಕುತ್ತಾ ಯುವಕನ ಪ್ರಾಣ ಬಿಕ್ಷೆ ಬೇಡುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/06/2022 10:50 pm