ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾರಿನ ರೂಪದಲ್ಲಿ ಬಂದ ಜವರಾಯ: ಸ್ಥಳದಲ್ಲೇ ಮೂವರ ಸಾವು

ಧಾರವಾಡ: ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂರು ಜನ ಸಾವನ್ನಪ್ಪಿದ್ದಾರೆ.

ನೇರಳೆ ಹಣ್ಣು ಮಾರಾಟ ಮಾಡಿಕೊಂಡು ವಾಪಸ್ ಬೈಕ್ ಮೇಲೆ ಮೂರು ಜನ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ನಲ್ಲಿದ್ದ ಸುಶೀಲವ್ವ ಹರಿಜನ, ಕಲ್ಲವ್ವ ಹರಿಜನ ಹಾಗೂ ರಾಜು ಮಿತ್ರಿ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್‌ಗೆ ಡಿಕ್ಕಿ ಹೊಡೆದ ನಂತರ ಕಾರು ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರು ಆ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By :
Kshetra Samachara

Kshetra Samachara

26/06/2022 09:55 pm

Cinque Terre

63 K

Cinque Terre

9

ಸಂಬಂಧಿತ ಸುದ್ದಿ