ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಬೈಕ್ ಸವಾರನೋರ್ವ ಸ್ಕಿಡ್ ಆಗಿ ಬಿದ್ದ ಪರಿಣಾಮ ಆತನ ತಲೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ.
ಅಲ್ಲಿನ ಸ್ಥಳೀಯರು ಆತನಿಗೆ ನೀರು ಕುಡಿಸಿ, ಚಿಕಿತ್ಸೆಗೆ ಕಳುಹಿಸಬೇಕು ಎಂದು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಇಲ್ಲ ಹೊರಗಡೆ ಹೋಗಿದೆ ಬಂದ ನಂತರ ಕಳುಹಿಸುತ್ತೇವೆ ಎಂಬ ಉತ್ತರವನ್ನು ಸಿಬ್ಬಂದಿ ನೀಡುತ್ತಿದ್ದಾರಂತೆ. ಒಂದು ಗಂಟೆಯಿಂದಲೂ ಇದೇ ಉತ್ತರವನ್ನು ಅವರು ಹೇಳುತ್ತಿದ್ದು, ಗಾಯಾಳು ರಸ್ತೆ ಪಕ್ಕಕ್ಕೆ ಕುಳಿತು ನೋವು ಅನುಭವಿಸುತ್ತಿದ್ದಾನೆ.
ಈ ಅಪಘಾತವಾದ ಕೂಡಲೇ ಸ್ಥಳೀಯರು ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ ಇದುವರೆಗೂ ಸ್ಥಳಕ್ಕೆ ಆ್ಯಂಬುಲೆನ್ಸ್ ಹೋಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Kshetra Samachara
21/06/2022 11:38 am