ನವಲಗುಂದ: ಯಮನೂರ ಚಾಂಗದೇವನ ದರ್ಶನಕ್ಕೆ ಸಾವಿರಾರು ಜನರು ಆಗಮಿಸಿ, ದರ್ಶನ ಪಡೆದು ನಂತರ ಬೆಣ್ಣೆ ಹಳ್ಳದಲ್ಲಿ ಸ್ನಾನ ಮಾಡಿ ಅಲ್ಲಿಂದ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಹೀಗೆ ದರ್ಶನಕ್ಕೆ ಬಂದ ಭಕ್ತನೋರ್ವ ಬೆಣ್ಣೆ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆಯೊಂದು ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದ ಬೆಣ್ಣೆ ಹಳ್ಳದಲ್ಲಿ ನಡೆದಿದೆ.
ಭಾವೈಕ್ಯತೆಗೆ ಸಾಕ್ಷಿಯಾದ ಯಮನೂರ ಚಾಂಗದೇವನ ದರ್ಶನಕ್ಕೆ ವಾರದಲ್ಲಿ ಎರಡು ದಿನ ಅಂದರೆ ಗುರುವಾರ ಹಾಗೂ ಭಾನುವಾರ ಭಕ್ತರ ಆಗಮನ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಇಂದು ದರ್ಶನಕ್ಕೆ ಗೋವಾ ಮೂಲದ ತಾಯಿ, ಮಗ ಹಾಗೂ ಮೊಮ್ಮಗ ಹಳ್ಳದಲ್ಲಿ ಸ್ನಾನಕ್ಕೆಂದು ತೆರಳಿದ್ದಾರೆ. ಈ ವೇಳೆ 25 ವರ್ಷ ವಯಸ್ಸಿನ ವಾಸಿಂ ಎಂಬಾತ ನೀರಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ. ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
19/06/2022 10:14 am