ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೂಲ್ವಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ- ಬೈಕ್ ಸವಾರರ ಸ್ಥಿತಿ ಗಂಭೀರ

ಹುಬ್ಬಳ್ಳಿ: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಕ್ರಾಸ್ ಬಳಿ ನಡೆದಿದೆ.

ನಗರದ ಹೊರವಲಯದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ನೂಲ್ವಿ ಬೆಳಗಲಿ ಸಮೀಪದ ಕ್ರಾಸ್ ಬಳಿ ಅತಿ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಲಾರಿ ಗುದ್ದಿದ್ದ ಪರಿಣಾಮ ಬೈಕ್ ಸವಾರರ ಕಾಲು ಕೈ ಮುರಿದಿವೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೇಲಿಂದ ಮೇಲೆ ಈ ಪ್ರದೇಶದ ಸುತ್ತಮುತ್ತ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಯಾವುದೇ ರೀತಿಯ ಸುರಕ್ಷತೆ ಇಲ್ಲದಂತಾಗಿದೆ. ಇಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡ ಬೇಕು ಮತ್ತು ಇಲ್ಲಿ ಪ್ಲೈಓವರ್ ನಿರ್ಮಾಣ ಮಾಡಬೇಕು ಎಂದು ರೈತ ಮುಖಂಡ ಹೇಮನಗೌಡರ ಬಸನಗೌಡರ ಒತ್ತಾಯಿಸಿದ್ದಾರೆ. ‌

Edited By : Shivu K
Kshetra Samachara

Kshetra Samachara

09/06/2022 10:50 am

Cinque Terre

43.57 K

Cinque Terre

9

ಸಂಬಂಧಿತ ಸುದ್ದಿ