ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾದಾಚಾರಿಗೆ ಗುದ್ದಿದ ಬೈಕ್ ಸವಾರ, ಕಿಮ್ಸ್ ಆಸ್ಪತ್ರೆಗೆ ಸೇರಿದ ವ್ಯಕ್ತಿ

ಹುಬ್ಬಳ್ಳಿ: ವೇಗವಾಗಿ ಬೈಕ್‌ನಲ್ಲಿ ಬಂದ ಸವಾರ ನಿಯಂತ್ರಣ ತಪ್ಪಿ ಪಾದಚಾರಿಗೆ ಗುದ್ದಿದ ಭೀಕರ ಘಟನೆ ಇಂದು ಬೆಳಿಗ್ಗೆ ಹುಬ್ಬಳ್ಳಿಯ ವಿದ್ಯಾನಗರದ ಗುರುದತ್ತ ಭವನ ಬಳಿ ನಡೆದಿದೆ.

55 ವರ್ಷದ ವ್ಯಕ್ತಿ ರಸ್ತೆ ದಾಟುತ್ತಿದ್ದ. ಈ ವೇಳೆ ವೇಗವಾಗಿ ಬಂದ Yamaha YZF R15 V3 ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವ್ಯಕ್ತಿಯ ಎಡಗಾಲು ಕತ್ತರಿಸಿ ಬಿದ್ದಂತಾಗಿದ್ದು, ರಕ್ತಸ್ರಾವದಿಂದ ಬಿದ್ದು ಒದ್ದಾಡುತ್ತಿದ್ದ. ಈ ವೇಳೆ ಅಲ್ಲೇ ಇಲ್ಲ ಕೆಲವರು ವ್ಯಕ್ತಿಯ ನೆರವಿಗೆ ನಿಂತು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

08/06/2022 12:06 pm

Cinque Terre

30.42 K

Cinque Terre

3

ಸಂಬಂಧಿತ ಸುದ್ದಿ