ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯೆ ಬರುವ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಿಗ್ಗೆ ಕಾರು ಮತ್ತು ಚಕ್ಕಡಿ ನಡುವೆ ಅಪಘಾತ ಸಂಭವಿಸಿ ಒಂದು ಎತ್ತು ಸಾವನ್ನಪ್ಪಿ ಇಬ್ಬರಿಗೆ ಗಾಯಗಳಾಗಿವೆ.
ಕಾರು ಚಾಲಕ ಇಬ್ರಾಹಿಂ (40) ಹಾಗೂ ಚಕ್ಕಡಿ ಓಡಿಸುತ್ತಿದ್ದ ಪರಶುರಾಮ್ (43) ಇಬ್ಬರಿಗೂ ಗಂಭೀರವಾಗಿ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆಗಾಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೂ ಘಟನಾಸ್ಥಳಕ್ಕೆ ಅಣ್ಣಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
05/06/2022 07:33 pm