ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಬಳಿ ಟಾಟಾ ಏಸ್ ಪಲ್ಟಿ: 12 ವಿದ್ಯಾರ್ಥಿಗಳಿಗೆ ಗಾಯ...!

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದ ಸರಹದ್ದಿನ ಪಾಟೀಲ್ ಅವರ ಜಮೀನು ಬಳಿ ವಿದ್ಯಾರ್ಥಿಗಳಿದ್ದ ಟಾಟಾ ಏಸ್ ಪಲ್ಟಿಯಾದ ಪರಿಣಾಮ 12 ವಿದ್ಯಾರ್ಥಿಗಳು ಹಾಗೂ ಆರು ಜನರು ಗಾಯಗೊಂಡ ಘಟನೆ ಬೆಳಿಗ್ಗೆ ನಡದಿದೆ.

ಮಣಕವಾಡ ಗ್ರಾಮದಿಂದ ನಲವಡಿ ಖಾಸಗಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಚಾಲಕ ಕ್ರಾಸ್ ನಲ್ಲಿ ಏಕಾಏಕಿ ಟಾಟಾ ಏಸ್ ತಿರುಗಿಸಿಕೊಂಡಾಗ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಗಾಯಾಳು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌.

ಸರ್ಕಾರಿ ಬಸ್ ಕೊರತೆ ಕಾರಣ ಅಪಘಾತಕ್ಕೆವಾಗಿದ್ದು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಕೊರತೆಯಿಂದ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಮಕ್ಕಳು ಅವಲಂಬಿಸಿದ್ದು, ಖಾಸಗಿ ವಾಹನ ಸವಾರರು ಬೇಕಾಬಿಟ್ಟಿ ವಾಹನ ಚಲಾವಣೆ ಮಾಡುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

Edited By : Nirmala Aralikatti
Kshetra Samachara

Kshetra Samachara

04/06/2022 12:30 pm

Cinque Terre

20.75 K

Cinque Terre

0

ಸಂಬಂಧಿತ ಸುದ್ದಿ