ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಟ್ಯಾಂಕರ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ, ತಪ್ಪಿದ ಭಾರಿ ಅನಾಹುತ

ನವಲಗುಂದ: ನವಲಗುಂದ ತಾಲ್ಲೂಕಿನ ಅರೆಕುರಹಟ್ಟಿ ಗ್ರಾಮದ ಬಳಿಯ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಟ್ಯಾಂಕರ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಅರೆಕುರಹಟ್ಟಿ ಗ್ರಾಮದ ಸೊಮ್ಮಣ್ಣ ಲಕ್ಕಣ್ಣವರ ಎಂಬುವವರು ತಮ್ಮ ಜಮೀನಿಗೆ ಟ್ರ್ಯಾಕ್ಟರ್ ಮೂಲಕ ತೆರಳುವ ವೇಳೆ ಹಿಂಬದಿಯಿಂದ ಟ್ಯಾಂಕರ ಗುದ್ದಿದೆ ಎಂದು ಗ್ರಾಮದ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಟ್ಯಾಂಕರ್ ವಿಜಯಪುರದ ಕಡೆಗೆ ಹೊರಟ್ಟಿತ್ತು.

ಅವಘಡದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೂ ವಾಹನಗಳಿಗೆ ಕೊಂಚ ಹಾನಿಯಾಗಿದೆ. ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By : Manjunath H D
Kshetra Samachara

Kshetra Samachara

02/06/2022 10:17 am

Cinque Terre

39.56 K

Cinque Terre

2

ಸಂಬಂಧಿತ ಸುದ್ದಿ