ನವಲಗುಂದ : ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಬಳಿ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ವೃದ್ದೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಯಮನೂರ ಚಾಂಗದೇವನ ದರ್ಶನಕ್ಕೆಂದು ಬಂದ ರೋಣ ತಾಲ್ಲೂಕಿನ ಭಕ್ತರು ಮರಳಿ ತಮ್ಮೂರಿಗೆ ಹೊರಟ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನೆಯಿಂದ ಚಾಲಕ ಮೌಲಾಸಾಬ್ ರಂಜಾನ್ ಸಾಬ್ ಮುಲ್ಲಾನವರ ಸ್ಥಳದಲ್ಲೇ ಮೃತ ಪಟ್ಟು, ಬಿಬಿಜಾನ್ ರಂಜಾನ್ ಸಾಬ್ ಮುಲ್ಲಾನವರ ಎಂಬ ವೃದ್ದೆಗೆ ಗಾಯಗಳಾಗಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಸದ್ಯ ಗಾಯಾಳುಗಳನ್ನು ನವಲಗುಂದ ತಾಲೂಕ ಆಸ್ಪತ್ರೆಗೆ ರವಾನಿಸಲಾಗಿದೆ.
Kshetra Samachara
30/05/2022 06:15 pm