ಹುಬ್ಬಳ್ಳಿ: ಹುಬ್ಬಳ್ಳಿ ಬೈಪಾಸ್ ರಸ್ತೆ ನಿಜಕ್ಕೂ ಹೆಣದ ಹೆದ್ದಾರಿಯಾಗಿ ಬದಲಾಗಿದೆ. ಇಂದು ಶುಕ್ರವಾರ ಒಂದೇ ದಿನ ಈ ರಸ್ತೆಯಲ್ಲಿ ಮೂರು ಅಪಘಾತಗಳು ಸಂಭವಿಸಿವೆ.
ಗೋಕುಲ ಗ್ರಾಮ ಸಮೀಪದ ಧಾರಾವತಿ ಆಂಜನೇಯ ದೇವಸ್ಥಾನ ಸಮೀಪ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
27/05/2022 11:14 pm