ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕನಸಿನ ಗೋಪುರ ನೆಲಸಮ ಮಾಡಿದ ಅಪಘಾತ: ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ..

ಹುಬ್ಬಳ್ಳಿ: ಅದು ನಿಜಕ್ಕೂ ದೊಡ್ಡ ದುರಂತವನ್ನೇ ಸೃಷ್ಟಿಸಿದ ಅಪಘಾತ. ಆ ಅಪಘಾತ ಅದೆಷ್ಟೋ ಕನಸಿನ ಗೋಪುರಗಳನ್ನು ನೆಲಸಮ ಮಾಡಿದೆ. ಭವಿಷ್ಯದಲ್ಲಿ ಸಾಕಷ್ಟು ಕನಸನ್ನು ಹೊತ್ತಿದ್ದ ಆ ಜೀವಗಳು ಅಪಘಾತದಲ್ಲಿ ಜೀವವನ್ನೇ ಕಳೆದುಕೊಂಡಿವೆ.

ಹೀಗೆ ಕಿಮ್ಸ್ ಶವಗಾರದ ಮುಂದೆ ಕಣ್ಣೀರು ಹಾಕುತ್ತಿರುವ ಸಂಬಂಧಿಕರು. ಮಕ್ಕಳನ್ನು ಕಳೆದುಕೊಂಡ ಹೆತ್ತವರು. ಇದೆಲ್ಲದಕ್ಕೂ ಕಾರಣವಾಗಿದ್ದೇ ಧಾರವಾಡ ಜಿಲ್ಲೆಯ ಬಾಡ ಗ್ರಾಮದ ಹತ್ತಿರ ನಡೆದ ಅಪಘಾತ. ಹೌದು... ನಿನ್ನೆಯಷ್ಟೇ ನಡೆದ ಅಪಘಾತದಲ್ಲಿ ಒಂಭತ್ತು ಜನರು ಸಾವನ್ನಪ್ಪಿದ್ದು, ಐದಾರು ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಮಧುಶ್ರೀ ಹಾಗೂ ಮನುಶ್ರೀ ಸಹೋದರಿಯರು ಸಾವನ್ನಪ್ಪಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ವಿಧಿಯ ಆಟಕ್ಕೆ ಸರಣಿ ಸಾವುಗಳು ಸಂಭವಿಸಿದ್ದು, ಬಾಲ ಯೋಗ ಪ್ರತಿಭೆ ಅನನ್ಯಾ ಕೂಡ ಅಪಘಾತದಲ್ಲಿ ಅಸುನೀಗಿದ್ದಾಳೆ.

ಇನ್ನೂ ಅಣ್ಣನ ಮದುವೆಯಲ್ಲಿ ಓಡಾಡಬೇಕಿದ್ದ ತಂಗಿಯರು. ಚಿಕ್ಕಪ್ಪನ ಮದುವೆಯಲ್ಲಿ ಓಡಾಡಬೇಕಿದ್ದ ಅಣ್ಣನ ಮಕ್ಕಳು, ಮನೆಗೆ ಮತ್ತೊಬ್ಬ ಸಹೋದರಿಯ ಆಗಮನವನ್ನು ಎದುರು ನೋಡುತ್ತಿದ್ದ ಅತ್ತಿಗೆಯರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಇಷ್ಟು ದೊಡ್ಡ ದುರಂತ ನಡೆದರೂ ಜನ್ರತಿನಿಧಿಗಳ್ಯಾರೂ ಇತ್ತ ಬಾರದೇ ಇರುವ ಬಗ್ಗೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಇಂತಹದೊಂದು ಅಪಘಾತ ಜಿಲ್ಲೆಗೆ ಜಿಲ್ಲೆಯೇ ಕಣ್ಣೀರು ಹಾಕುವಂತಾಗಿದೆ. ಘಟನೆಯಲ್ಲಿ ವಯಸ್ಕರು ಹಾಗೂ ಮಕ್ಕಳೇ ಹೆಚ್ಚಾಗಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯೋ ದುರ್ವಿಧಿಯೇ ನಿನಗೆ ಕರುಣೆ ಬಾರದೇ ಹೋಯಿತೆ ಎಂದು ಊರಿಗೆ ಊರೇ ದೇವರಿಗೆ ಶಾಪ ಹಾಕುವಂತಾಗಿದೆ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/05/2022 07:57 pm

Cinque Terre

135.44 K

Cinque Terre

16

ಸಂಬಂಧಿತ ಸುದ್ದಿ