ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲಾರಿ ರೂಪದಲ್ಲಿ ಬಂದ ಜವರಾಯ: ಮೂರು ವರ್ಷದ ಬಾಲಕಿ ಸಾವು

ಧಾರವಾಡ: ಬಾಲಕಿಯೋರ್ವಳ ಮೇಲೆ ಮಿನಿ ಲಾರಿ ಹಾಯ್ದು ಹೋದ ಪರಿಣಾಮ ಬಾಲಕಿ ಸಾವನ್ನಪ್ಪಿದ ಘಟನೆ ಧಾರವಾಡದ ಕಲ್ಯಾಣನಗರದಲ್ಲಿ ನಡೆದಿದೆ.

ಅನಂ ರಿಜ್ವಾನ್ ಐನಾಪೂರ (3) ಎಂಬ ಬಾಲಕಿಯೇ ಸಾವನ್ನಪ್ಪಿದವಳು. ಬಾಲಕಿ ಧಾರವಾಡ ಟೈವಾಕ್ ಕಾಲೊನಿ ನಿವಾಸಿಯಾಗಿದ್ದು, ಪೋಷಕರ ಜೊತೆ ಬೇರೆ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈ ವೇಳೆ ಬಾಲಕಿ ಮೇಲೆ ಸೆಫ್ಟಿಕ್ ಟ್ಯಾಂಕಿನ ಮಿನಿ ಲಾರಿ ಹಾಯ್ದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಯ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ.

ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

13/05/2022 09:38 pm

Cinque Terre

42.19 K

Cinque Terre

0

ಸಂಬಂಧಿತ ಸುದ್ದಿ