ಧಾರವಾಡ: ಬೆಳಗಾವಿ ರಸ್ತೆಯಲ್ಲಿರುವ ಜಿಟಿಸಿ ಮುಂಭಾಗದ ರಸ್ತೆಯಲ್ಲಿ ಬೊಲೆರೊ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನ ಮುಂಭಾಗ ಜಖಂಗೊಂಡ ಘಟನೆ ಇಂದು ಮಧ್ಯಾಹ್ನ ಧಾರವಾಡದಲ್ಲಿ ನಡೆದಿದೆ.
ಮುಂದೆ ಹೊರಟಿದ್ದ ಬೊಲೆರೊ ವಾಹನಕ್ಕೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರಿನ ಮುಂಭಾಗ ಮಾತ್ರ ಜಖಂಗೊಂಡಿದೆ. ಈ ಅಪಘಾತದಿಂದ ಬೆಳಗಾವಿ ರಸ್ತೆಯಲ್ಲಿ ಸ್ವಲ್ಪ ಸಮಯ ವಾಹನ ದಟ್ಟನೆ ಕೂಡ ಉಂಟಾಗಿತ್ತು.
Kshetra Samachara
07/05/2022 09:48 pm