ಕಲಘಟಗಿ: ವೇಗವಾಗಿ ಬಂದ ಗೂಡ್ಸ್ ಲಾರಿಯೊಂದು ಚಾಲಕ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನಕ್ಕೆ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಘಟಗಿ ತಾಲ್ಲೂಕಿನ ಕಾಡನಕೊಪ್ಪ ಹಾಗೂ ಕುರುವಿನಕೊಪ್ಪ ರಸ್ತೆ ಕ್ರಾಸ್ ಬಳಿ ನಡೆದಿದೆ.
ಉಗ್ಗಿನಕೇರಿ ಗ್ರಾಮದ ಬಸವರಾಜ ಗೋಕುಲ ಮೃತ ಸವಾರ. ಗೂಡ್ಸ ಲಾರಿ ಚಾಲಕ ಬಿ. ಗುಡಿಹಾಳದಿಂದ ಚಳಮಟ್ಟಿ ಕಡೆಗೆ ವೇಗವಾಗಿ ಹೋಗುತ್ತಿದ್ದ. ಇದೇ ವೇಳೆ ಉಗ್ಗಿನಕೇರಿ ಗ್ರಾಮದ ಅಣ್ಣಪ್ಪ ವಾಲಿಕಾರ ಕುರುವಿನಕೊಪ್ಪ ರಸ್ತೆ ದಾಟುತ್ತಿದ್ದ. ಇವನಿಗೆ ಡಿಕ್ಕಿ ಹೊಡೆಯುವುದನ್ನು ಪಡಿಸಿ ತಪ್ಪಿಸಿಕೊಳ್ಳಲು ಚಾಲಕ ವೇಗವಾಗಿ ಲಾರಿ ಚಾಲನೆ ಮಾಡಿದ್ದಾನೆ. ಪರಿಣಾಮ ಕಾಡನಕೊಪ್ಪ ಕಡೆಯಿಂದ ಕುರುವಿನಕೊಪ್ಪ ಕಡೆಗೆ ಹೋಗುತ್ತಿದ್ದ ಬಸವರಾಜ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಸವಾರ ಬಸವರಾಜ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿ ಸವಾರ ಶಿವರಾಜ ಗೋಕುಲ ಅವರಿಗೆ ಗಾಯವಾಗಿದೆ. ಘಟನೆ ಬೆನ್ನಲ್ಲೇ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2022 11:37 am