ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾರೋಬೆಳವಡಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಧಾರವಾಡ: ಖಾಸಗಿ ಸಂಸ್ಥೆಯ ಲಾರಿ ಹಾಗೂ ಅಶೋಕ ಲೈಲ್ಯಾಂಡ್ ಲಾರಿಯ ನಡುವೆ ಇಂದು ಬೆಳಗಿನಜಾವ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಹಾರೋಬೆಳವಡಿ ಗ್ರಾಮದ ಬಳಿ ಇರುವ ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸವದತ್ತಿ ಕಡೆಗೆ ಹೋಗುತ್ತಿದ್ದ ಲಾರಿಗೆ ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರೂ ಚಾಲಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಎರಡೂ ಲಾರಿಗಳ ಮುಂದಿನ ಭಾಗ ಸಂಪೂರ್ಣ ಜಖ್ಖಂಗೊಂಡಿದ್ದು, ಚಾಲಕರ ಶವಗಳು ಲಾರಿಯಲ್ಲಿ ಸಿಲುಕಿವೆ.

ಮೃತಪಟ್ಟವರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಘಟನೆಯಿಂದ ಧಾರವಾಡ ಸವದತ್ತಿ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nirmala Aralikatti
Kshetra Samachara

Kshetra Samachara

29/04/2022 08:59 am

Cinque Terre

57.49 K

Cinque Terre

11

ಸಂಬಂಧಿತ ಸುದ್ದಿ