ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ದೇವರ ಮನೆಯ ದೀಪ ಧಗಧಗ-ತಪ್ಪಿದ ಅನಾಹುತ

ನವಲಗುಂದ : ದೇವರ ಜಗುಲಿ ಮುಂದೆ ಬೆಳಗಿಸಲಿಟ್ಟಿದ್ದ ದೀಪ ಧಗಧಗಿಸಿದ ಪರಿಣಾಮ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ನವಲಗುಂದದಲ್ಲಿ ನಡೆದಿದೆ.

ನವಲಗುಂದ ಪಟ್ಟಣದ ಗೌಡರ ಓಣಿಯಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮನೆಯವರ ಹೆಸರು ತಿಳಿದು ಬಂದಿಲ್ಲ.

ಅಗ್ನಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಮನೆಯ ಪಿಠೋಪಕರಣ ಕೆಲ ವಸ್ತುಗಳು ಸುಟ್ಟು ಹೋಗಿವೆ.

ಈ ಕುರಿತಂತೆ ನವಲಗುಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

16/04/2022 04:32 pm

Cinque Terre

67.42 K

Cinque Terre

1

ಸಂಬಂಧಿತ ಸುದ್ದಿ