ನವಲಗುಂದ : ನವಲಗುಂದ ತಾಲ್ಲೂಕಿನ ಆರೆಕುರಹಟ್ಟಿ ಗ್ರಾಮದಲ್ಲಿ ಕ್ರೂಸರ್ ವಾಹನವೊಂದು ವೃದ್ಧೆಗೆ ಡಿಕ್ಕಿಯಾದ ಪರಿಣಾಮ ವೃದ್ಧೆ ಮೃತ ಪಟ್ಟ ಘಟನೆ ಭಾನುವಾರ ನಡೆದಿದೆ.
ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಡೆದು ಹೋಗುತ್ತಿದ್ದ ದೇವಕ್ಕ ಎಂಬ ವೃದ್ಧೆಗೆ ಹಿಂದಿನಿಂದ ಕ್ರೂಸರ್ ವಾಹನವೊಂದು ಗುದ್ದಿದೆ ಎನ್ನಲಾಗಿದ್ದು, ಘಟನೆಯಿಂದ ಗಂಭೀರವಾಗಿ ಗಾಯಗೊಂಡ ವೃದ್ಧೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವೃದ್ಧೆ ಮೃತ ಪಟ್ಟಿದ್ದು, ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/04/2022 01:10 pm