ನವಲಗುಂದ : ತಾಲೂಕಿನ ತಲೆಮೊರಬ ಮತ್ತು ಬ್ಯಾಲಾಳ ಗ್ರಾಮಗಳ ನಡುವೆ ಬುಧವಾರ ತಡರಾತ್ರಿ ಬೈಕ್ ಸವಾರನ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದ ವ್ಯಕ್ತಿ ಗುರುವಾರ ಮೃತ ಪಟ್ಟಿದ್ದಾನೆ.
ಮೃತ ದುರ್ದೈವಿಯನ್ನು ತಲೆಮೊರಬ ಗ್ರಾಮದ 22 ವಯಸ್ಸಿನ ಶಿವರುದ್ರಪ್ಪ ಮಹದೇವಪ್ಪ ಅಂಗಡಿ ಎಂದು ಗುರುತಿಸಲಾಗಿದೆ. ಕೂಡಲೇ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ರವಾನಿಸಿದರೂ ಸಹ ಗುರುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ತನ್ನ ತಾಯಿಯ ಗ್ರಾಮವಾದ ಬ್ಯಾಲ್ಯಾಳ ದಿಂದ ಹನಸಿ ಗ್ರಾಮಕ್ಕೆ ತನ್ನ ಸಹೋದರಿಯ ಮನೆಗೆ ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
Kshetra Samachara
08/04/2022 04:05 pm