ನವಲಗುಂದ : ನವಲಗುಂದ ಪಟ್ಟಣದಿಂದ ನರಗುಂದ ಕಡೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಬೆಣ್ಣೆಹಳ್ಳದ ಸೇತುವೆ ಬಳಿ ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ಕರೆದೋಯುವ ಮಾರ್ಗ ಮಧ್ಯ ಮೃತ ಪಟ್ಟ ಘಟನೆ ಬುಧವಾರ ನಡೆದಿದೆ.
ಹೌದು ಅಳಗವಾಡಿ ಗ್ರಾಮದ ನಿವಾಸಿಯಾದ ಸುಮಾರು 50 ವರ್ಷ ವಯಸ್ಸಿನ ಶಿವಲಿಂಗಪ್ಪ ಬಸಪ್ಪ ಈರೆಷನವರ ಎಂಬ ವ್ಯಕ್ತಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯ ಮೃತ ಪಟ್ಟಿದ್ದಾನೆ. ಇನ್ನು ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
30/03/2022 08:03 pm