ನವಲಗುಂದ: ನಮಲಗುಂದ ತಾಲೂಕಿನ ಯಮನೂರ ಚಾಂಗದೇವನ ದರ್ಶನಕ್ಕೆ ವಿಜಯಪುರದಿಂದ ಬುಲೆರೋ ವಾಹನದಲ್ಲಿ ಬಂದ ವ್ಯಕ್ತಿಗೆ ಕ್ರೂಸರ್ ವಾಹನ ಗುದ್ದಿದೆ ಎನ್ನಲಾಗುತ್ತಿದ್ದು, ವ್ಯಕ್ತಿಗೆ ಗಂಭೀರವಾಗಿ ಗಾಯಗಳಾಗಿವೆ.
ಚಾಂಗದೇವನ ದರ್ಶನಕ್ಕೆ ವಿಜಯಪುರ ಜಿಲ್ಲೆಯ ಸಾರವಾಡದಿಂದ ಬುಲೆರೋ ವಾಹನದಲ್ಲಿ ಬಂದಿದ್ದ ಭಕ್ತರು, ಊಟಕ್ಕಾಗಿ ವಾಹನವನ್ನು ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಕ್ರೂಸರ್ ವಾಹನ ಮೋತಿಲಾಲ್ ದಾವಲ್ ಸಾಬ್ ಗಿರಿದಾಳ್ ಎಂಬುವರಿಗೆ ಗುದ್ದಿದೆ ಎನ್ನಲಾಗಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡ ಮೋತಿಲಾಲ್ ದಾವಲ್ ಸಾಬ್ ಗಿರಿದಾಳ್ ನನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಈಗ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿದೆ. ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳದಲ್ಲಿ ನಿಜಕ್ಕೂ ನಡೆದಿದ್ದೇನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
Kshetra Samachara
27/03/2022 08:48 pm