ಹುಬ್ಬಳ್ಳಿ: ಆಕಳು ಕರುವೊಂದು ರಸ್ತೆಯಲ್ಲಿ ಹೊರಟಿರುವಾಗ ಟಿಪ್ಪರ್ ಬಂದು ಗುದ್ದಿದ ಪರಿಣಾಮ, ಆಕಳು ಕರುವಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಪಗಡಿಗಲ್ಲಿ ವೃತ್ತದಲ್ಲಿ ನಡೆದಿದೆ.
ಆಕಳು ಕರು ರಸ್ತೆ ದಾಟುತ್ತಿರುವಾಗ ಟಿಪ್ಪರ್ ಚಾಲಕ ಕರುವನ್ನು ನೋಡದೆ ಗುದ್ದಿದ್ದಾನೆ. ಅಲ್ಲೆ ಸ್ಥಳದಲ್ಲಿದ್ದ ಕಾಶಪ್ಪ ಬಿಜವಾಡ ಅವರು ಸ್ಥಳೀಯರ ಸಹಾಯದಿಂದ ಆಕಳು ಕರುವನ್ನು ವೈದ್ಯರಿಗೆ ಕರೆ ಮಾಡಿ ಕರೆಯಿಸಿ ಕರುವಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆಗೆ ಮೆರೆದಿದ್ದಾರೆ.
Kshetra Samachara
19/03/2022 03:50 pm