ಹುಬ್ಬಳ್ಳಿ : ಆಕಸ್ಮಿಕವಾಗಿ ಬೆಂಕಿ ಹೊತ್ತಿದ ಪರಿಣಾಮ, ಸ್ವೀಟ್ ಅಂಗಡಿ ಧಗ ಧಗಿಸಿದ ಘಟನೆ ಹುಬ್ಬಳ್ಳಿಯ ಎಂ.ಜಿ ಮಾರ್ಕೆಟ್ ಬೆಲ್ಲಾರಿ ಗಲ್ಲಿಯಲ್ಲಿ ಸಂಭವಿಸಿದೆ.
ಎಚ್. ಎಂ ಸ್ವೀಟ್ಸ್ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದ ಪ್ರಮಾಣ ಅಪಾರ ಹಾನಿಯಾಗಿದೆ. ಅಂಗಡಿ ಮಾಲೀಕರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ದಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಅಂಗಡಿಗೆ ಬೆಂಕಿ ಹತ್ತಿದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ವ್ಯಾಪಾರಸ್ಥರಲ್ಲಿ ಆತಂಕ ಹೆಚ್ಚಾಗಿದೆ.
Kshetra Samachara
11/03/2022 03:48 pm