ನವಲಗುಂದ : ತಾಲೂಕಿನ ಅಳಗವಾಡಿ ಗ್ರಾಮದ ಶಾಂತಾದೇವಿ ದೇವಸ್ಥಾನದ ಹಿಂಭಾಗದಲ್ಲಿ ಗೋವಿನಜೋಳ, ಗೋದಿ, ಕಡಲೆ ಹೊಟ್ಟಿನ ಬಣವಿಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಹಾನಿಯಾಗಿದೆ.
ಭಾನುವಾರ ಸಂಜೆ 6 ಗಂಟೆಯ ಹೊತ್ತಿಗೆ ಬಣವಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ತಿರಕಪ್ಪ , ಮಾಂತೇಶ್, ಮಲ್ಲಪ್ಪ ಲಕ್ಕುಂಡಿ ಅವರಿಗೆ ಸೇರಿದ ಬಣವಿ ತುಂಬಿದ ಎರಡು ಶೆಡ್ ಗಳು ಸಂಪೂರ್ಣ ಸುಟ್ಟು ಭಸ್ಮಗೊಂಡಿವೆ. ಇದರಿಂದಾಗಿ ಸುಮಾರು 3 ಲಕ್ಷದಷ್ಟು ಹಾನಿಯಾಗಿದೆ ಎನ್ನಲಾಗುತ್ತಿದೆ.
ಇನ್ನು ಘಟನೆ ನಡೆಯುತ್ತಿದ್ದಂತೆ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
06/03/2022 09:42 pm