ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಎತ್ತಿನ ಬಂಡಿಗೆ ಲಾರಿ ಡಿಕ್ಕಿ- ಮೂರು ರೈತರಿಗೆ ಗಂಭೀರ ಗಾಯ

ಕಲಘಟಗಿ: ಎತ್ತಿನ ಬಂಡಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ರೈತರು ಗಂಭೀರವಾಗಿ ಗಾಯಗೊಂಡ ಘಟನೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ೬೩ರ ಬಳಿ ನಡೆದಿದೆ.

ರೈತರಾದ ಗೋಪಾಲ ಅಣ್ಣಿಗೇರಿ (೪೦), ಶಂಕ್ರಪ್ಪ ತಿಪ್ಪಣ್ಣ ಅಣ್ಣಿಗೇರಿ (೫೫) ಹಾಗೂ ಕಲ್ಲಯ್ಯ ಓಸಿಮಠ ತೀವ್ರಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಲಘಟಗಿ ಪೊಲೀಸರು ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಕಲಘಟಗಿಯಿಂದ ಹುಬ್ಬಳ್ಳಿ ಕಡೆ ಹೋರಟಿದ್ದ ಅಪರಿಚಿತ ಲಾರಿ ಕತ್ತಲಲ್ಲಿ ಚಕ್ಕಡಿ ಸರಿಯಾಗಿ ಕಾಣದೆ ಡಿಕ್ಕಿ ಹೊಡೆದಿದೆ. ಪರಿಣಾಮ ಎತ್ತುಗಳು ಭೀಕರ ಗಾಯಗೊಂಡಿದ್ದು, ಚಕ್ಕಡಿಯಲ್ಲಿ ಕುಳಿತ್ತಿದ್ದ ಮೂವರು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಲಘಟಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

23/02/2022 10:54 pm

Cinque Terre

60.55 K

Cinque Terre

2

ಸಂಬಂಧಿತ ಸುದ್ದಿ