ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಡುಗೆ ಅನಿಲ ಪೈಪ್ ಲೈನ್‌ನಲ್ಲಿ ಸೋರಿಕೆ- ನಡು ರಸ್ತೆಯಲ್ಲೇ ಅಗ್ನಿಯ ರೌದ್ರ ನರ್ತನ

ಹುಬ್ಬಳ್ಳಿ: ಅಡುಗೆ ಅನಿಲದ (ಗ್ಯಾಸ್) ಪೈಪ್ ಲೈನ್‌ನಲ್ಲಿ ಸೋರಿಕೆ ಉಂಟಾದ ಪರಿಣಾಮ ಏಕಾಏಕಿ ಬೆಂಕಿ ಕಾಣಿಕೊಂಡು ಅಗ್ನಿಯ ರೌದ್ರ ನರ್ತನ ತಾಳಿದ ಘಟನೆ ಹುಬ್ಬಳ್ಳಿಯ ತೆಂಗಿನಕಾಯಿ ಲೇಔಟ್‌ನಲ್ಲಿ ನಡೆದಿದೆ.

ಗ್ಯಾಸ್ ಲಿಕೇಜ್ ಆಗಿರುವ ಪರಿಣಾಮ ಜನರ ಆತಂಕಗೊಂಡು ಮನೆಯಿಂದ ಹೊರ ಬಂದಿದ್ದಾರೆ. ಇನ್ನೂ ಜನರು ಹೊರ ಬರುತ್ತಿದ್ದಂತೆಯೇ ಬೆಂಕಿ ಹತ್ತಿಕೊಂಡು ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆ ಮನೆಗೆ ಸಂಪರ್ಕ ಕಲ್ಪಿಸುವ ಅಡುಗೆ ಅನಿಲದ ಪೈಪ್ ಲೈನ್ ಇದಾಗಿದೆ.

ಇನ್ನೂ ಬೆಂಕಿ ಹತ್ತಿಕೊಂಡ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ, ಗೋಕುಲ ಠಾಣೆ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

21/02/2022 12:45 pm

Cinque Terre

73.28 K

Cinque Terre

12

ಸಂಬಂಧಿತ ಸುದ್ದಿ