ಹುಬ್ಬಳ್ಳಿ: ಮಹಾನಗರ ಪಾಲಿಕೆ ಸದಸ್ಯೆಯೊಬ್ಬರ ಪತಿ ಇದ್ದ ಕಾರು ವಿದ್ಯಾರ್ಥಿನಿಯ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ನಗರದ ಶಿರೂರ ಪಾರ್ಕ್ ನಲ್ಲಿ ನಡೆದಿದೆ.
ವಿದ್ಯಾರ್ಥಿನಿಯು ತನ್ನ ತರಗತಿಗಳನ್ನು ಮುಗಿಸಿಕೊಂಡು ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದರು. ಇದೇ ಮಾರ್ಗವಾಗಿ ಬಂದ ಕಾರ್ಪೊರೇಟರ್ ಲಕ್ಷ್ಮೀ ಹಿಂಡಸಗೇರಿ ಅವರ ಪತಿ ಮಾರುತಿ ಹಿಂಡಸಗೇರಿ ಅವರಿದ್ದ ಇನೋವಾ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯು ಕಾರಿನ ಅಡಿ ಸಿಲುಕಿದ್ದು, ವಿದ್ಯಾರ್ಥಿನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆಯ ಪೊಲೀಸರು, ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.
Kshetra Samachara
04/02/2022 07:34 pm