ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಪ್ಪ ಮೃತಪಟ್ಟ ಸ್ಥಳಕ್ಕೆ ಬಂದು ಬಿಕ್ಕಿ ಬಿಕ್ಕಿ ಅತ್ತ ಮಗ

ಧಾರವಾಡ: ಇತ್ತೀಚೆಗೆ ಧಾರವಾಡ ತಾಲೂಕಿನ ಯರಿಕೊಪ್ಪ ಬಳಿಯ ಬೈಪಾಸ್ ರಸ್ತೆಯಲ್ಲಿ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಗೋಕಾಕ ಮೂಲದ ಯೋಧ ವಸಂತರಾಜ್ ಅವರು ಮೃತಪಟ್ಟಿದ್ದರು. ಅಪಘಾತವಾದ ಸ್ಥಳದಲ್ಲಿ ಪಂಚನಾಮೆ ಮಾಡಲೆಂದು ಯೋಧ ವಸಂತರಾಜ್ ಅವರ ಪತ್ನಿ ಹಾಗೂ ಪುತ್ರನನ್ನು ಕರೆದುಕೊಂಡು ಬರಲಾಗಿತ್ತು. ಆಗ ಪುತ್ರ ಪೃಥ್ವಿರಾಜ್, ತನ್ನ ಅಪ್ಪನ ಅಪಘಾತವಾದ ಸ್ಥಳ ಕಂಡು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆಯಿತು.

ತನ್ನ ಅಪ್ಪ ಜೀವ ಬಿಟ್ಟ ಸ್ಥಳಕ್ಕೆ ನಮಸ್ಕಾರ ಮಾಡಿ ಅಪ್ಪನಿಗೆ ಮಗ ಪೃಥ್ವಿರಾಜ್ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ವಸಂತರಾಜ್ ಅವರು ಆರ್ಮಿಯಲ್ಲಿ ಸುಬೇದಾರ ಆಗಿ ಕೆಲಸ ಮಾಡುತ್ತಿದ್ದರು. ಇನ್ನೊಂದು ವಾರದಲ್ಲಿ ಮೇಜರ್ ಆಗಿಯೂ ಅವರು ಬಡ್ತಿ ಹೊಂದುವವರಿದ್ದರಂತೆ.

ತಮ್ಮ ಪತ್ನಿ ಸುರೇಖಾ ಅವರಿಗೆ ಅಪೆಂಡಿಕ್ಸ್ ಆಪರೇಶನ್ ಮಾಡಿಸಲೆಂದು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಯರಿಕೊಪ್ಪದ ಬಳಿ ಕಾರು ಹಾಗೂ ಲಾರಿ ನಡುವೆ ಮೊನ್ನೆಯಷ್ಟೇ ಅಪಘಾತ ಸಂಭವಿಸಿ ವಸಂತರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ವಸಂತರಾಜ್ ಅವರ ಪತ್ನಿ ಸುರೇಖಾ ಹಾಗೂ ಪುತ್ರ ಪೃಥ್ವಿರಾಜ್ ಅವರನ್ನು ಪಂಚನಾಮೆಗೆಂದು ಕರೆದುಕೊಂಡು ಬರಲಾಗಿತ್ತು. ಅಪಘಾತವಾದ ಸ್ಥಳ ಕಂಡು ಸುರೇಖಾ ಹಾಗೂ ಪೃಥ್ವಿರಾಜ್ ಅವರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆಯಿತು. ಅವರ ಮಗ ಪೃಥ್ವಿರಾಜ್ ಅಂತೂ ಅಪ್ಪನ ಅಪಘಾತವಾದ ಸ್ಥಳ ಕಂಡು ಬಿಕ್ಕಿ ಬಿಕ್ಕಿ ಅತ್ತು, ಅಪಘಾತವಾದ ಸ್ಥಳಕ್ಕೆ ನಮಸ್ಕಾರ ಮಾಡಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿತು.

Edited By : Shivu K
Kshetra Samachara

Kshetra Samachara

02/02/2022 04:26 pm

Cinque Terre

37.93 K

Cinque Terre

28

ಸಂಬಂಧಿತ ಸುದ್ದಿ