ಹುಬ್ಬಳ್ಳಿ: ಮಾನವ ಜನ್ಮ ದೊಡ್ಡದು, ಮಾನವೀಯತೆ ಅದಕ್ಕಿಂತ ದೊಡ್ಡದು.. ರಸ್ತೆ ಅಪಘಾತದಲ್ಲಿ ಬಿದ್ದಿದ್ದ ಗಾಯಾಳನ್ನು ಸಚಿವರು ನೆರವು ನೀಡಿದ್ದಾರೆ. ಅಪಘಾತ ಆಗಿದ್ದನ್ನು ಗಮನಿಸಿದ ಸಚಿವರು ತಮ್ಮ ಎಸ್ಕಾರ್ಟ್ ವಾಹನದಲ್ಲಿ ಗಾಯಾಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಹೌದು,,,, ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಅವರು ನಿನ್ನೆ ತಡರಾತ್ರಿ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗಳಿಗೆ ಚಾಲನೆ ನೀಡಿ, ಮರಳಿ ಹುಬ್ಬಳ್ಳಿಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ, ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ಅಪಘಾತವಾಗಿತ್ತು. ಅಪಘಾತವಾದ ವ್ಯಕ್ತಿಯನ್ನು ಗಮನಿಸಿದ ಸಚಿವ ಮುನೇನಕೊಪ್ಪ ಅವರು ತಮ್ಮ ವಾಹನ ನಿಲ್ಲಿಸಿ, ಆತನಿಗೆ ಧೈರ್ಯ ತುಂಬಿ, ಕೂಡಲೇ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ, ತುರ್ತು ಚಿಕಿತ್ಸೆಗಾಗಿ ಶಾಸಕರ ಪೊಲೀಸ್ ಬೆಂಗಾವಲು ವಾಹನದಲ್ಲಿಯೇ ಆಸ್ಪತ್ರೆಗೆ ಕಳುಹಿಸಿ ಕೊಟ್ಟು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಯಾವುದೇ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ಕೈಜೋಡಿಸಿ, ಇದರಲ್ಲಿ ಯಾವುದೇ ರೀತಿಯ ಕಾನೂನು ತೊಡಕುಗಳು ಇರುವುದಿಲ್ಲ. ಸರಿಯಾದ ಸಮಯದಲ್ಲಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆಗೆ ಸಹಕರಿಸಿ ಒಬ್ಬರ ಜೀವ ಉಳಿಸುವ ಕಾರ್ಯ ನಮ್ಮದಾಗಬೇಕು ಎಂದೂ ಅಲ್ಲಿ ಸೇರೀರುವ ಜನರಿಗೆ ಕೂಡ ಮನವರಿಕೆ ಮಾಡಿದ್ದಾರೆ.
Kshetra Samachara
01/02/2022 10:11 pm