ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದದಲ್ಲಿ ಬಸ್ ಅಪಘಾತ : 14 ಪ್ರಯಾಣಿಕರಿಗೆ ಗಾಯ, ಗಂಭೀರ ಸ್ಥಿತಿಯಲಿದ್ದ ವೃದ್ದೆ ಗೆ ಕಿಮ್ಸ್ ನಲ್ಲಿ ಚಿಕಿತ್ಸೆ

ನವಲಗುಂದ : ಬುಧವಾರ ಸಂಜೆ ನವಲಗುಂದ ಪಟ್ಟಣದ ಹೊರ ವಲಯದ ನರಗುಂದ ರಸ್ತೆಯ ಬೆಣ್ಣೆ ಹಳ್ಳದ ಸೇತುವೆ ಬಳಿ ಬಸ್ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 30 ಜನ ಪ್ರಯಾಣಿಕರಿದ್ದರೆಂದು ಹೇಳಲಾಗುತ್ತಿದೆ ಒಟ್ಟು ಪ್ರಯಾಣಿಕರಲ್ಲಿ ಸದ್ಯ 14 ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಒಬ್ಬ ವೃದ್ದೆ ಮಾತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹೌದು ಬಸ್ಸಿನ ಸ್ಟೇರಿಂಗ ಕಟ್ ಆದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಚಾಲಕ ತಿಳಿಸಿದ್ದು, ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಕಲ್ಮೇಶ್ ಬೆನ್ನೂರ್ ಗಾಯಗೊಂಡವರನ್ನು ಸಿಕ್ಕ ನವಲಗುಂದ ತಾಲೂಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಈಗಾಗಲೇ ತಾಲೂಕ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಒಬ್ಬ ವೃದ್ದೆಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

Edited By : Nagesh Gaonkar
Kshetra Samachara

Kshetra Samachara

26/01/2022 08:09 pm

Cinque Terre

75.52 K

Cinque Terre

1

ಸಂಬಂಧಿತ ಸುದ್ದಿ