ವರದಿ: ಬಿ. ನಂದೀಶ
ಅಣ್ಣಿಗೇರಿ : ಅಣ್ಣಿಗೇರಿ ಪಟ್ಟಣದಲ್ಲಿ ತಡ ರಾತ್ರಿ ಮೂರು ಗಂಟೆಯ ಸುಮಾರಿಗೆ ಶಾಮಿಯಾನ ಗೋಡೌನಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ಶಾಮಿಯಾನ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.
ಹೌದು ಪಟ್ಟಣದ ಹರಿಜನಕೇರಿ ಕರಿಸಿದ್ದೇಶ್ವರ ದೇವಸ್ಥಾನದ ಹತ್ತಿರ ಶಶಿಧರ ಅಜ್ಜನ್ನವರ ಎಂಬುವವರಿಗೆ ಸೇರಿದ ಶಾಮಿಯಾನ ಗೋಡೌನಗೆ ಶಾರ್ಟ್ ಸಾರ್ಕಿಟ್ ನಿಂದ ಬೆಂಕಿ ತಗುಲಿತ್ತು.
ಇನ್ನು ಘಟನೆಯಿಂದ ಸುಟ್ಟ ವಾಸನೆ ಸ್ಥಳೀಯರಿಗೆ ಬರುತ್ತಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇನ್ನು ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪಿಎಸ್ ಐ ಲಾಲಸಾಬ ಜೂಲಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
08/01/2022 03:56 pm